Adoration:
ಮಹಿಮೆ ಪ್ರಭುತ್ವ ತುಂಬಿದವನೇ
ಹರುಷದಿ ಸ್ತುತಿಸುವೆನು
ಪರಿಶುದ್ಧನಾದ ಯೇಸುವನ್ನು
ಎಂದೆಂದೂ ಸ್ತುತಿಸುವೆ1. ಉನ್ನತ ದೇವರು ನೀನೆ
ಜ್ಞಾನ ತುಂಬಿದವನೇ
ಎಲ್ಲಾ ಮೊಣಕಾಲು
ನಿನಗೆ ಬಗ್ಗುವುದು
ಉನ್ನತನೆ ಅತಿಉನ್ನತನೆ
ಎಂದೆಂದೂ ಸ್ತುತಿಸುವೆ2. ಪರಿಶುದ್ಧ ದೇವರು ನೀನೆ
ನರನಾಗಿ ಜನಿಸಿದೆಯೇ
ಪರಿಶುದ್ಧ ರಕ್ತವ ಸುರಿಸಿ
ನಮಗಾಗಿ ಬಲಿಯಾದೆಯೇ
ಗಣ ಮಹಿಮೆ ನಾವು ಸಲ್ಲಿಸುವೆವು
ಎಂದೆಂದೂ ಸ್ತುತಿಸುವೆ
Worship:
ಉನ್ನತ ದೇವನೇ ನನ್ನೇಸು ರಾಜನೇ
ನಿನ್ನಯ ಪ್ರೀತಿಯ ನನ್ ಹೃದಯ ಬಯಸಿದೆ1. ರೂಪಾಂತ್ರಗೊಳಿಸಯ್ಯ ಮಹಿಮೆಯ ಕರ್ತನೆ
ನಿನ್ ಮುಖ ಭಾವದಿ ಮಾರ್ಪಡಿಸು ನನ್ನನ್ನು
ಹಗಲೆಲ್ಲ ಇರುಳೆಲ್ಲ -ಹೃದಯ ನಿನಗಾಗಿ ಮಿಡಿಯುತ್ತಿದೆ
ನೆನಪೆಲ್ಲ ಮಾತೆಲ್ಲ ಪ್ರೀಯನೆ ನಿನ್ನನ್ನೇ ನುಡಿಯುತ್ತಿದೆ || ಹಗಲೆಲ್ಲ||2.ಹರುಷದ ಹೊನಲಲಿ ಎಂದೆಂದೂ ಮುಳುಗುವೆ
ಸ್ತುತಿಸಿ ನಲಿಯುವೆ ಪರಿಶುದ್ಧನಾಗುವೆ || ಹಗಲೆಲ್ಲ||
3. ನಿನ್ ಪ್ರೀತಿ ಹರಡಲಿ ಬಳಿಯ ಹಾಗೆಯೆ
ಮಡಿಲಲ್ಲಿ ಮಲಗುವೇ ಮಗುವಾಗಿ ಕರ್ತನೇ || ಹಗಲೆಲ್ಲ||
Communion Song: ಕರ್ತನೇ ನಿನ್ನಯ ಪಾದದಿ ನನಗೆ ನೆಮ್ಮದಿನೆಮ್ಮದಿಯೇ
ಆಸಕ್ತಿಯಿಂದ ಹಾಡುವೆ ನಾ ಅನಂದ ಆನಂದವೇ
ಆಶ್ರಯವೆ ಅತಿಶಯವೇ ಆರಾಧನೆ ಆರಾಧನೆ1.ಯಜ್ಞದ ಕುರಿಮರಿ ಪಾಪವನ್ನೆಲ್ಲ
ಸಂಪೂರ್ಣ ಹೊತ್ತವನೇ
ಪರಿಶುದ್ದ ರಕ್ತ ನನಗಾಗಿಯೆ ಸ್ವಾಮಿ
ಭಾಗ್ಯ ಸೌಭಾಗ್ಯವೇ
ಪರಿಶುದ್ದನೇ ಪಾವನನೇ
ಆರಾಧನೆ ಆರಾಧನೇ -22.ನಿನ್ನಯ ಕೃಪೆಯ ನೆನೆದು ನೆನೆದು
ನಾನ್ನಾತ್ಮ ಚೈತನ್ಯವೇ
ನಲ್ಲನು ನೀ ನನ್ ಪ್ರಿಯನು ನೀ
ನನ್ನೇಸು ರಾಜ ನೀ
ನನ್ ದೇವನೇ ನನ್ನ ಯೇಸುವೇ
ಆರಾಧನೆ ಆರಾಧನೆ -23.ಎಷ್ಟೊಂದು ಕಷ್ಟವು ನನಗೆ ಬಂದರು
ನಿನ್ನನ್ನು ಅಗಲೆನುರ
ಕ್ತವ ಸುರಿಸಿ ಸಾಕ್ಷಿಯಾಗಿರುವೆ
ನಿಶ್ಚಯ ನಿಶ್ಚಯವೇ
ರಕ್ಷಕನೇ ಯೇಸುದೇವಾ
ಆರಾಧನೆ ಆರಾಧನೇ -2Offering: ನನ್ನ ಜನವೇ ಮಾನತಿರುಗು ಯೇಸುವಿನಬಳಿ ಬಾ,
ಕೊನೆಯ ಕಾಲ ಸಮೀಪಿಸಿದೆ ಇನ್ನೂ ತಡವೇಕೆ. 1. ನಿನ್ನ ನೆನಸಿ ಶಿಲುಬೆಯಲ್ಲಿ ದಾಹ ದಾಹ ಎಂದ
ನಿನ್ನ ರಕ್ಷಿಸಿ ಪಾಪ ಕ್ಷಮಿಸಿತಾನೇ ಬಲಿಯಾದ 2. ದುಷ್ಟ ಗುಣವನ್ನು ಮಾರ್ಪಡಿಸಲು ತನ್ ರಕ್ತ ಸುರಿಸಿರುವ
ರೋಗ ನೀಗಿಸಿ ಸುಖ ಕೊಡಲು ಮೈಯಲ್ಲಾ ಗಾಯ ಗೊಂಡ 3. ನಿನಕೊಂದು ನಿವಾಸವನ್ನು ಕಟ್ಟುವ ಪರಲೋಕದಿ
ನಿನ್ನ ಹುಡುಕಿ ಬರುಸಿರುವ ಸಿದ್ಧನಾಗಿರುವೆಯಾ