Adoration: [Sangeerthanegalu] E: 2/4ಸುಂದರ ರಕ್ಷಕನೇ - ನಿನ್ನ ವಂದಿತ ನಾಮವನೇ
ಕುಂದದೆ ಕೀರ್ತಿಸಿ ಎಂದಿಗೂ ಹಾಡುತ
ಬಂದು ಭಜಿಪೆವೈಯ್ಯಾ 1 ನರರೊಳೆಲೈಪತಿಯೇ ನೀ ಪರಿಮಳ ವಾಸನೆಯೇ
ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು
ನಿರುತವು ಸದ್ಗುರುವೇ
2 ಸಾಯದ ನರವರನೇ ನೀ ಗಾಯವ ಮಾಣಿಪನೇ
ಮಾಯದ ಜಗದಲಿ ನೀನೆಮಗಾಶ್ರಾಯ
ಕಾಯೋ ವಿಮೋಚಕನೇ
3 ಪರಮದಯಾಕರನೇ ನೀ ಧರಣಿಯ ಭಾಸ್ಕರನೇ
ನರರಿಗೆ ಮಾರ್ಗವು ವರಗಳ ಮೂಲವು
ಕರುಣೆಯ ಸಾಗರನೇ
Worship [ MCS ] G: 2/4ನನ್ನ ಆಶ್ರಯ ಬಂಡೆ ನೀನೆ
ನನ್ನ ರಕ್ಷಣೆಯ ದೇವಾ ನೀನೆ
ಶಕ್ತಿಯು ಪ್ರಭುತ್ವವು ತುಂಬಿದವನೇ
ಮಹಿಮೆಗೆ ಪಾತ್ರನು ನೀ ಆರಾಧನೆ ನೀನಗೆ - ೪ 1. ನಿನ್ನ ರೆಕ್ಕೆಗಳ ನೆರಳಿನಲ್ಲಿ
ಶಾಶ್ವತವಾಗಿ ಹರ್ಷಗಯ್ಯುವೆ
ಪಾವನನೇ ನನ್ನ ಜೊತೆಗಾರನೇ
ಸ್ತುತಿಗೆ ಪಾತ್ರನು ನೀ 2. ನನ್ನ ದುರ್ಬಲ ಕ್ಷಣಗಳಲ್ಲಿ
ನಿನ್ನ ಕೃಪೆಯನ್ನು ದಯಪಾಲಿಸಿ,
ಯೇಸುರಾಜ ನನ್ನ ಬಲ ನೀನೆ
ಯಾವುದಕ್ಕೂ ಹೆದರನು ನಾ 3. ನನ್ನ ಉಸಿರೂಯಿರುವ-ದಿನಗಳೆಲ್ಲ
ನಿನ್ನ ಹಾಡಿ ಕೀರ್ತಿಸುವೆ
ರಾಜ ನೀನ್ಮಾಡಿದ ದಯಗಳನ್ನೂ
ನೆನಸಿ ಭಜಿಸುವೆನು
Offering Song [MCS]: ಮಹಾ ಅದ್ಭುತನೇ
ಮಹಾ ಆಶ್ಚರ್ಯನೇ
ಯೇಸು ರಕ್ಷಕನೇ 1. ಯೇಸುವೇ; ನೀ ನಮಗಾಗಿ ಜನಿಸಿರುವೆ
ಯೇಸುವೇ; ನೀ ನಮ್ಮೊಳಗೆ ಜೀವಿಸುವೆ 2. ಯೇಸುವೇ; ನೀ ಚೈತನ್ಯ ಜಲವಾದೆಯೇಸುವೇ;
ನೀ ಜೀವದ ರೊಟ್ಟಿಯದೇ 3. ಯೇಸುವೇ; ನೀ ನಮಗಾಗಿ ಬರಲಿರುವೆ
ಯೇಸುವೇ; ನೀ ನಮ್ಮನ್ನು ಕರೆದೊಯ್ಯುವೆ