21 Jan, Kannada Worship

Adoration: 

ಕಾಲಿಡುವ ಜಾಗವೆಲ್ಲಾ ನನ್ ಕರ್ತನಿಗೆ
ಸ್ವಂತವಾಗಲಿ
ಕಾಣುವ ಭುವಿಯಲ್ಲೆಲ್ಲಾ ಕಲ್ವಾರಿ ಧ್ವಜ
ಹಾರಲಿ

1.ಹಾರಲಿ ಹಾರಲಿ ಶಿಲುಬೆಯ ಜಯ ಧ್ವಜ-ಹಾಲೇಲೂಯಾ
ಬೆಳೆಗಲಿ ಬೆಳೆಗಲಿ ಯೇಸುವಿನ ಶ್ರೇಷ್ಠ ನಾಮ –ಹಾಲೇಲೂಯಾ

2.ಏಳಲಿ ಏಳಲಿ ಗಿದ್ಯೋನನ ಸೈನ್ಯವು ಹಾಲೇಲುಯಾ
ಮೊಳಗಲಿ, ಮೊಳಗಲಿ ಯೇಸುವೇ ಮಾರ್ಗವೆಂದು ಹಾಲೇಲುಯಾ

3.ಸಾಗಲಿ ಸಾಗಲಿ ಜಪ ಸೈನ್ಯ ಸ್ತುತಿ ಸೈನ್ಯ
-ಹಾಲೇಲೂಯಾ
ಗೆಲ್ಲಲಿ ಗೆಲ್ಲಲಿ ವೈರಿಯಾ ಯೆರಿಕೋವ
–ಹಾಲೇಲೂಯಾ

Worship: 

ತಂದೆಯೇ ನಿನ್ನ ಆರಾಧಿಸುವೆವು 
ಯೇಸುವೇ ನಿನ್ನ ಸ್ತುತಿಸುವೆವು 
ಆತ್ಮಸ್ವರೂಪನೆ ನಿನ್ನ ಪ್ರೀತಿಸುವೆವು 
ಪ ।। ಆರಾಧಿಸುವೆವು ಸ್ತುತಿಸುವೆವು ಪ್ರೀತಿಸುವೆವು

1. ಮಗನಾಗಿ ಸ್ವೀಕರಿಸಿ ಹೊಸ ಜೀವ ನನಗೆ ಕೊಟ್ಟೆ (2) ಯಾಜಕರು ನಾವೆಲ್ಲಾ ನಿನ್ನ ಸೇವೆಯ ಮಾಡುವೆವು 

2. ಸಕಾಲವ ಪಡೆದವನೇ ಸರ್ವಶಕ್ತನೇ - ೨
ಮಹಿಮೆಗೆ ಯೋಗ್ಯನು ನೀ ಎಂದೂ ಕುಂದದ ಪ್ರಕಾಶವೆ 

Offering:
ನನ್ನ ಜನವೇ ಮಾನತಿರುಗು ಯೇಸುವಿನಬಳಿ ಬಾ, 
ಕೊನೆಯ ಕಾಲ ಸಮೀಪಿಸಿದೆ ಇನ್ನೂ ತಡವೇಕೆ. 

ನಿನ್ನ ನೆನಸಿ ಶಿಲುಬೆಯಲ್ಲಿ 
ದಾಹ ದಾಹ ಎಂದ 
ನಿನ್ನ ರಕ್ಷಿಸಿ ಪಾಪ ಕ್ಷಮಿಸಿ
ತಾನೇ ಬಲಿಯಾದ 

ದುಷ್ಟ  ಗುಣವನ್ನು ಮಾರ್ಪಡಿಸಲು 
ತನ್  ರಕ್ತ ಸುರಿಸಿರುವ 
ರೋಗ ನೀಗಿಸಿ ಸುಖ ಕೊಡಲು 
ಮೈಯಲ್ಲಾ ಗಾಯ ಗೊಂಡ 

ನಿನಕೊಂದು ನಿವಾಸವನ್ನು 
ಕಟ್ಟುವ ಪರಲೋಕದಿ 
ನಿನ್ನ ಹುಡುಕಿ ಬರುತ್ತಿರುವ  
ಸಿದ್ಧನಾಗಿರುವೆಯಾ