Adoration: Dmaj ನಮ್ಮೊಳಗೆ ವಾಸಿಸುವ ಪವಿತ್ರಾತ್ಮನೇ ಈ ದಿನ ನಿನ್ ಚಿತ್ತದಂತೆ ನಡೆಸಬೇಕಯ್ಯ ಪವಿತ್ರಾತ್ಮನೇ ಪವಿತ್ರಾತ್ಮನೇ ಪರಿಶುದ್ದ ದೇವರಾತ್ಮನೇ 1.ಹೇಗೆ ನಾನು ಪ್ರಾರ್ಥಿಸಲಿ ಏನೆಂದು ಪ್ರಾರ್ಥಿಸಲಿ ಕಲಿಸಿ ಕೊಡಿ ಪವಿತ್ರಾತ್ಮನೇ ವೇದ ವಚನ ಅರಿತುಕೊಂಡು ಗೂಡಾರ್ಥ ತಿಳಿಯಲು ಬೆಳಕನ್ನು ನೀಡಿ ಆತ್ಮನೇ 2.ಚಿಂತೆಯನು ಮರೆಯಲು ಕರ್ತನನ್ನು ಸ್ತುತಿಸಲು ಕಲಿಸಿಕೊಡಿ ಪವಿತ್ರಾತ್ಮನೇ ಉಪಕಾರ ಸ್ಮರಿಸಲು ಕೃತಜ್ಞತೆ ಮಾಡಲು ತಿಳಿಸಿಕೊಡಿ ಪವಿತ್ರಾತ್ಮನೇ 3.ಎಲ್ಲಿಗೆ ನಾ ಹೋಗಲಿ ಏನನ್ನು ಮಾಡಲಿ ದಾರಿ ನಡೆಸಿ ಪವಿತ್ರಾತ್ಮನೇ ನಿನ್ ಚಿತ್ತ ಇಲ್ಲದ ಸ್ಥಳಗಳಿಗೆ ಹೋಗದಂತೆ ಸಹಾಯವ ಮಾಡಿ ಆತ್ಮನೇ Worship: Emin ರಾಜಾ ನಿನ್ ಸಮ್ಮುಖದಿ ಹಗಲಿರುಳು ಕುಳಿತಿರುವೆ ಸ್ತುತಿಸಿ ನಲಿಯುವೆನು ಚಿಂತೆಯ ಮರೆಯುವೆನು ಆರಾಧನೆ ಆರಾಧನೆ ಅಪ್ಪಾ ಅಪ್ಪಾ ನಿನಗೆ ತಾನೇ 1.ನನ್ ಬಲವೇ ನನ್ ಕೋಟೆಯೇ ಆರಾಧನೆ ನಿಮಗೆ ಆಶ್ರಯವೇ ಅತಿಶಯವೇ ಆರಾಧನೇ ನಿಮಗೆ 2.ಎಲ್ಲೆಲ್ಲೂ ಇರುವ ಯೇಹೋವಾ ಎಲೋಹಿ ಆರಾಧನೆ ನಿಮಗೆ ನಮ್ಮ ನೀತಿಯೇ ಯೇಹೋವ ಚೀದ್ಕೇನು ಆರಾಧನೆ ನಿಮಗೆ 3.ಪರಿಶುದ್ದಗೊಳಿಸುವ ಯೇಹೋವ ಮೆಕ್ಕಾದೀಸ್ ಆರಾಧನೆ ನಿಮಗೆ ನನ್ನ ರೂಪಿಸುವ ಯೇಹೋವ ಹೊಸೇನು ಆರಾಧನೆ ನಿಮಗೆ Offering [MCS] Cmaj ನನಗೇನು ಚಿಂತೆ ಇಲ್ಲಪ್ಪ ಎಲ್ಲಕ್ಕೂ ನಿನ್ನ ಸ್ತುತಿಮಾಡುವೆ ಯಾರಮೇಲೂ ಕಹಿ ಇಲ್ಲಪ್ಪ ಎಲ್ಲರಿಗೂ ಪ್ರಾರ್ಥಿಸುವೆ ನನಗೇನು ಚಿಂತೆ ಇಲ್ಲಪ್ಪ 1. ಇದುವರೆ ಸಹಾಯ ನೀನೆ ಇನ್ನುಮುಂದೆಯೂ ಸಹಾಯ ನೀನೆ || ನನಗೇನು ಚಿಂತೆ ಇಲ್ಲಪ್ಪ …|| 2. ಸಂಕಷ್ಟಗಳು ಹೆಚ್ಚಾದಾಗ ನೀನೆ ನನ್ನ ಸಂತೈಸುವೆ || ನನಗೇನು ಚಿಂತೆ ಇಲ್ಲಪ್ಪ …|| 3. ಯಾವಾಗಲು ನನ್ನಮುಂದೆ ನಿನ್ನನೇ ನಿಲ್ಲಿಸಿರುವೆ || ನನಗೇನು ಚಿಂತೆ ಇಲ್ಲಪ್ಪ …||
