ನಿಮ್ಮ ದುಃಖವು ಸಂತೋಷವಾಗುವುದು[#181]

-=-=-=-=-=-=-=-=-=-=-=-
ನಿಮ್ಮ ದುಃಖವು ಸಂತೋಷವಾಗುವುದು,
ನಿಮ್ಮ ಕಳವಳ ಕಣ್ಣೀರು ಎಲ್ಲಾ ಮರೆಯಾಗ್ವದು (೨),

ಕಳವಳವೇ ಬೇಡ (೨) 
ನಮ್ಮ ಯೇಸು ಕೈ ಬಿಡಲಾರ (೨) 
||ನಿಮ್ಮ ದುಃಖವು||

1. ನಡೆದದನ್ನು ನೆನಸಿ ಕೊರಗದಿರು, ಹಳೆದನ್ನು ಮರೆತುಬಿಡು (೨),
ಕರ್ತನು ಹೊಸದನ್ನು ಮಾಡುವನು, ಇಂದೇ ನೀ ಕಾಣುವೆ (೨),

2. ಅಗ್ನಿಯ ಮೇಲೆ ನಡೆದರೂ, ದಹಿಸಿ ಹೋಗಲಾರೆ (೨),
ನದಿಗಳನ್ನು ನೀ ದಾಟಿದರೂ, ಮುಳುಗಿ ಹೋಗಲಾರೆ (೨) ||ಕಳವಳವೇ||

3. ಶಕ್ತಿಗೆ ಮೀರಿದ ಶೋಧನೆಯ ನಿನಗೆಂದೂ ನೀಡನು (೨),
ಸಹಿಸಲು ನಿನಗೆ ಬಲ ಕೊಡುವ, ತಪ್ಪಲು ದಾರಿ ತೋರುವ (೨) ||ಕಳವಳವೇ||


----------------

Null.

-=-=-=-=-=-=-=-=-=-=-=-

See Song #?

See Song #??

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.